1 line
1.2 KiB
Plaintext
1 line
1.2 KiB
Plaintext
\c 2 ದೇವರು ಪಾಪಾತ್ಮರನ್ನು ರಕ್ಷಿಸಿ ಕ್ರಿಸ್ತನ ಜೀವದಲ್ಲಿ ಪಾಲುಗಾರರನ್ನಾಗಿ ಮಾಡಿರುವುದಕ್ಕೆ ಆತನ ಕೃಪೆಯೇ ಕಾರಣ \v 1 ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದಿರಿ. \v 2 ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ; ವಾಯುಮಂಡಲದಲ್ಲಿನ ದುಷ್ಟ ಶಕ್ತಿಗಳ ಅಧಿಪತಿಗೆ, ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಕೆಲಸ ನಡೆಸುವ ದುರಾತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ. \v 3 ಪೂರ್ವದಲ್ಲಿ ಅವಿಧೇಯರಾಗಿದ್ದು, ಶರೀರಭಾವದ ಆಸೆಗಳಿಗೆ ಅಧೀನರಾಗಿ ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು. |